Footer Logo

November 13, 2021

South Eastern Railway Recruitment 2021: ಸ್ನಾತಕೋತ್ತರ ಪದವೀಧರರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ

  ADMIN       November 13, 2021

 South Eastern Railway Recruitment 2021: ಸ್ನಾತಕೋತ್ತರ ಪದವೀಧರರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ



ಸೌತ್ ಈಸ್ಟರ್ನ್ ರೈಲ್ವೆ(ಆಗ್ನೇಯ ರೈಲ್ವೆ) (South Eastern Railway)ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 11 ಸೀನಿಯರ್ ಇನ್ ಸ್ಟ್ರಕ್ಟರ್(Senior Instructor) ಹಾಗೂ ಜೂನಿಯರ್ ಇನ್ ಸ್ಟ್ರಕ್ಟರ್(Junior Instructor)  ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿ ಅರ್ಜಿ ಸಲ್ಲಿಸಬಹುದಾಗಿದೆ. ಸ್ನಾತಕೋತ್ತರ ಪದವಿ(Master's Degree) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಆಫ್ ಲೈನ್ (ಪೋಸ್ಟ್ )(Offline) ಮೂಲಕ ನವೆಂಬರ್ 18ರವರೆಗೆ ಅರ್ಜಿ ಹಾಕಬಹುದಾಗಿದೆ. ಅಕ್ಟೋಬರ್ 21ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಆಗ್ನೇಯ ರೈಲ್ವೆಯ ಅಧಿಕೃತ ವೆಬ್ ಸೈಟ್  ser.indianrailways.gov.in ಗೆ ಭೇಟಿ ನೀಡಿ


 South Eastern Railway Recruitment 2021 ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 55 ವರ್ಷ ಇರಬೇಕು.


 South Eastern Railway Recruitment 2021 ವೇತನ:

ಸೀನಿಯರ್ ಇನ್ ಸ್ಟ್ರಕ್ಟರ್ ಹಾಗೂ ಜೂನಿಯರ್ ಇನ್ ಸ್ಟ್ರಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ₹9,300-34,800 ವೇತನ ನೀಡಲಾಗುತ್ತದೆ.


 South Eastern Railway Recruitment 2021 ಉದ್ಯೋಗದ ಸ್ಥಳ:

ಆಯ್ಕೆಯಾದ ಅಭ್ಯರ್ಥಿಯನ್ನು ಪಶ್ಚಿಮ ಬಂಗಾಳದ ಖರಗ್ ಪುರದಲ್ಲಿ ಕೆಲಸಕ್ಕೆ ನೇಮಿಸಲಾಗುತ್ತದೆ.


 South Eastern Railway Recruitment 2021  ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ದಾಖಲಾತಿ ಪರಿಶೀಲನೆ
  • ವೈಯಕ್ತಿಕ ಸಂದರ್ಶನ


 South Eastern Railway Recruitment 2021 ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/10/2021
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18/11/2021


 South Eastern Railway Recruitment 2021 ಪ್ರಮುಖ ಲಿಂಕ್ ಗಳು :

ಅಧಿಕೃತ ನೋಟಿಫಿಕೇಶನ್: ಕ್ಲಿಕ್ ಮಾಡಿ  

ಅಧಿಕೃತ ವೆಬ್ಸೈಟ್ :ಕ್ಲಿಕ್ ಮಾಡಿ 



 South Eastern Railway Recruitment 2021 ಅರ್ಜಿ ಸಲ್ಲಿಸುವ ಬಗೆ:


  1. ಮೊದಲಿಗೆ ಸೌತ್  ಈಸ್ಟರ್ನ್ ರೈಲ್ವೆಯ ಅಧಿಕೃತ ವೆಬ್ ಸೈಟ್  ser.indianrailways.gov.in ಗೆ ಭೇಟಿ ನೀಡಬೇಕು .
  2. ಅಲ್ಲಿ ಕಾಣಸಿಗುವ “Recruitment/ Career/ Advertisement menu” ಲಿಂಕ್  ಮೇಲೆ ಕ್ಲಿಕ್ ಮಾಡಿ.
  3. ಖಾಲಿ ಇರುವ ಹುದ್ದೆಗಳ ನೋಟಿಫಿಕೇಶನ್ ಗಾಗಿ ಸರ್ಚ್ ಮಾಡಿ, ಅದರ ಮೇಲೆ ಕ್ಲಿಕ್ ಮಾಡಿ.
  4. ಅಧಿಕೃತ ನೋಟಿಫಿಕೇಶನ್ ನ ಲಿಂಕ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ.
  5. ನೋಟಿಫಿಕೇಶನ್ ನಲ್ಲಿ ನೀಡಲಾಗಿರುವ ಎಲ್ಲಾ ಸೂಚನೆಗಳನ್ನು ಸರಿಯಾಗಿ ಓದಿ.
  6. ಕೆಳಗೆ ನೀಡಲಾಗಿರುವ Official Online Apply/ Registration ಲಿಂಕ್ ಮೇಲೆ ಕ್ಲಿಕ್ ಮಾಡಿ.
  7. ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
  8. ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಸರಿಯಾದ ಫಾರ್ಮ್ಯಾಟ್ ಹಾಗೂ ಸೈಜಿನಲ್ಲಿ ಅಪ್ ಲೋಡ್ ಮಾಡಿ.
  9. ಕೊನೆಯಲ್ಲಿ ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ, ಸಬ್ ಮಿಟ್ ಕೊಡಿ.
  10. ಬಳಿಕ ಸಂಸ್ಥೆ ಅರ್ಜಿ ಶುಲ್ಕ ಕೇಳಿದ್ದರೆ, ಪಾವತಿಸಿ.
  11. ಕೊನೆಯಲ್ಲಿ ಅರ್ಜಿಯನ್ನು ಸಬ್ ಮಿಟ್ ಮಾಡಿ, ಒಂದು ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ.

logoblog

Thanks for reading South Eastern Railway Recruitment 2021: ಸ್ನಾತಕೋತ್ತರ ಪದವೀಧರರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ

Previous
« Prev Post

No comments:

Post a Comment

Popular Posts

Followers