Footer Logo

November 8, 2021

IOCL Recruitment 2021: ಇಂಡಿಯಲ್ ಆಯಿಲ್ ಕಾರ್ಪೊರೇಷನ್​ನಲ್ಲಿ 527 ಹುದ್ದೆಗಳು ಖಾಲಿ

  ADMIN       November 8, 2021

IOCL Recruitment 2021: ಇಂಡಿಯಲ್ ಆಯಿಲ್ ಕಾರ್ಪೊರೇಷನ್​ನಲ್ಲಿ 527 ಹುದ್ದೆಗಳು ಖಾಲಿ



IOCL Recruitment 2021: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್(Indian Oil Corporation Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 527 ಟೆಕ್ನಿಕಲ್(Technical) ಮತ್ತು ನಾನ್​-ಟೆಕ್ನಿಕಲ್ ಅಪ್ರೆಂಟಿಸ್(Non-Technical Apprentice) ಹುದ್ದೆಗಳು ಖಾಲಿ ಇವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್​​(Indian Oil Corporation)ನ ಅಧಿಕೃತ ವೆಬ್​ಸೈಟ್​​(Official Website) iocl.com ಗೆ ಭೇಟಿ ನೀಡಬಹುದಾಗಿದೆ.


IOCL Recruitment 2021 ಹುದ್ದೆಯ ಮಾಹಿತಿ:


  • ಪಶ್ಚಿಮ ಬಂಗಾಳ: 236
  • ಬಿಹಾರ: 68
  • ಒಡಿಶಾ: 69
  • ಜಾರ್ಖಂಡ್​: 35
  • ಅಸ್ಸಾಂ: 119


IOCL Recruitment 2021 ವಯೋಮಿತಿ:


ಸಾಮಾನ್ಯ ಮತ್ತು EWS ವರ್ಗದ ಅಭ್ಯರ್ಥಿಗಳ ವಯಸ್ಸು ಅಕ್ಟೋಬರ್ 31 ಕ್ಕೆ 18-24 ವರ್ಷದೊಳಗಿರಬೇಕು. SC/ST/OBC/ PWD ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.


IOCL Recruitment 2021 ವಿದ್ಯಾರ್ಹತೆ:


  • ಟೆಕ್ನಿಕಲ್ ಮತ್ತು ನಾನ್​ ಟೆಕ್ನಿಕಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಐಟಿಐ/ಡಿಪ್ಲೋಮಾ/ 12ನೇ ತರಗತಿ ಓದಿರಬೇಕು.
  • ಅಪ್ರೆಂಟಿಸ್​​ಶಿಪ್​ ತರಬೇತಿಯ ಅವಧಿಯು​ 12 ತಿಂಗಳುಗಳಾಗಿರುತ್ತದೆ. ಟ್ರೇಡ್ ಅಪ್ರೆಂಟಿಸ್ ಡೇಟಾ ಎಂಟ್ರಿ ಆಪರೇಟರ್(ಫ್ರೆಶರ್ ಅಪ್ರೆಂಟಿಸ್) ಗಳಿಗೆ 15 ತಿಂಗಳ ತರಬೇತಿ ಇರುತ್ತದೆ. 
  • ಟ್ರೇಡ್ ಅಪ್ರೆಂಟಿಸ್​ ರೀಟೆಲ್ ಸೇಲ್ಸ್​ ಅಸೋಸಿಯೇಟ್​ಗಳಿಗೆ ​(ಫ್ರೆಶರ್) 14 ತಿಂಗಳ ತರಬೇತಿ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.


IOCL Recruitment 2021 ಆಯ್ಕೆ ಪ್ರಕ್ರಿಯೆ:


  • ಟೆಕ್ನಿಕಲ್ ಮತ್ತು ನಾನ್​ ಟೆಕ್ನಿಕಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನೀಡಲಾಗುತ್ತದೆ. ಡಿಸೆಂಬರ್ 19ರಂದು ಪರೀಕ್ಷೆ ನಡೆಯಲಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ.


IOCL Recruitment 2021 ದಿನಾಂಕ:


ಅರ್ಜಿ ಸಲ್ಲಿಸಲು ಆರಂಭ ದಿನ:07/11/2021

ಅರ್ಜಿ ಸಲ್ಲಿಸಲು ಕೊನೆ ದಿನ :04/12/2021


IOCL Recruitment 2021 ಲಿಂಕ್ :


ಅಧಿಸೂಚನೆ :ಇಲ್ಲಿ ಕ್ಲಿಕ್ ಮಾಡಿ 


ಅಧಿಕೃತ ವೆಬ್ಸೈಟ್ :ಇಲ್ಲಿ ಕ್ಲಿಕ್ ಮಾಡಿ 



logoblog

Thanks for reading IOCL Recruitment 2021: ಇಂಡಿಯಲ್ ಆಯಿಲ್ ಕಾರ್ಪೊರೇಷನ್​ನಲ್ಲಿ 527 ಹುದ್ದೆಗಳು ಖಾಲಿ

Previous
« Prev Post

No comments:

Post a Comment

Popular Posts

Followers