Footer Logo

November 19, 2021

Border Security Force Recruitment 2021

  ADMIN       November 19, 2021

 BSF Jobs: ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗಾವಕಾಶ., 10th, ITI ಪಾಸಾದವರು ಅರ್ಜಿ ಹಾಕಿ

Border Security Force Recruitment 2021: ಬಾರ್ಡರ್ ಸೆಕ್ಯೂರಿಟಿ ಫೋರ್ಸ್‌ ಗ್ರೂಪ್‌ ಸಿ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.


ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಗಡಿ ಭದ್ರತಾ ಪಡೆಯಲ್ಲಿ ಗ್ರೂಪ್‌ ಸಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಕಟಣೆ ಹೊರಡಿಸಲಾಗಿದೆ. ಸದರಿ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ಆಸಕ್ತರು ಬಾರ್ಡರ್ ಸೆಕ್ಯೂರಿಟಿ ಫೋರ್ಸ್‌ ಅಧಿಕೃತ ಪೋರ್ಟಲ್ rectt.bsf.gov ನಲ್ಲಿ ಡಿಸೆಂಬರ್ 29 ರವರೆಗೆ ಅರ್ಜಿ ಸಲ್ಲಿಸಬಹುದು.

BSF ಈ ನೇಮಕಾತಿ ಪ್ರಕ್ರಿಯೆ ಮೂಲಕ ಒಟ್ಟು 72 ಗ್ರೂಪ್‌ ಸಿ ಹುದ್ದೆಗಳನ್ನು ಭರ್ತಿ ಮಾಡಲಿದೆ. ಅವುಗಳೆಂದರೆ..


ಗಡಿ ಭದ್ರತಾ ಪಡೆ ಅರ್ಹತೆಗಳು:

  • ಕಾನ್ಸ್‌ಟೇಬಲ ಮತ್ತು ಹೆಡ್‌ ಕಾನ್ಸ್‌ಟೇಬಲ್‌: ಈ ಹುದ್ದೆಗಳಿಗೆ ಮೆಟ್ರಿಕ್ಯೂಲೇಷನ್‌ ಜತೆಗೆ ಐಟಿಐ ಸರ್ಟಿಫಿಕೇಟ್‌ ಅನ್ನು ಸಂಬಂಧಿಸಿದ ಟ್ರೇಡ್‌ ನಲ್ಲಿ ಪಡೆದಿರಬೇಕು.
  • ಅಸಿಸ್ಟಂಟ್ ಸಬ್‌ಇನ್ಸ್‌ಪೆಕ್ಟರ್: ಮೆಟ್ರಿಕ್ಯೂಲೇಷನ್‌ ಜತೆಗೆ ಡಿಪ್ಲೊಮ ಡಿಗ್ರಿಯನ್ನು ಡ್ರ್ಯಾಫ್ಟ್‌ಮನ್‌ಶಿಪ್‌ (ಸಿವಿಲ್) ನಲ್ಲಿ ಅಂಗೀಕೃತ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ನಲ್ಲಿ ಪಡೆದಿರಬೇಕು.

ಗಡಿ ಭದ್ರತಾ ಪಡೆ ವಯೋಮಿತಿ ಅರ್ಹತೆಗಳು:


ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ವಯಸ್ಸು ದಾಟಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಗಡಿ ಭದ್ರತಾ ಪಡೆ ಆಯ್ಕೆ ವಿಧಾನ:

  1. ಲಿಖಿತ ಪರೀಕ್ಷೆ.
  2. ದೈಹಿಕ ಸಾಮರ್ಥ್ಯ ಪರೀಕ್ಷೆ.
  3. ವೈದ್ಯಕೀಯ ಪರೀಕ್ಷೆ.
  4. ಮೂಲ ದಾಖಲೆಗಳ ಪರಿಶೀಲನೆ.


ಲಿಖಿತ ಪರೀಕ್ಷೆಯಲ್ಲಿ ಜೆನೆರಲ್ ಇಂಟೆಲಿಜೆನ್ಸ್‌, ರೀಸನಿಂಗ್, ಜೆನೆರಲ್ ಅವಾರ್‌ನೆಸ್, ಟೆಕ್ನಿಕಲ್ ಸಬ್ಜೆಕ್ಟ್‌ಗಳ ಬಗ್ಗೆ ಕೇಳಲಾಗುತ್ತದೆ. ಸಾಮಾನ್ಯ, EWS, OBC ಅಭ್ಯರ್ಥಿಗಳು ಕನಿಷ್ಠ 45 ಅಂಕಗಳನ್ನು, ಇತರೆ ಅಭ್ಯರ್ಥಿಗಳು ಕನಿಷ್ಠ 40 ಅಂಕಗಳನ್ನು ಲಿಖಿತ ಪರೀಕ್ಷೆಯಲ್ಲಿ ತೆಗೆದಲ್ಲಿ, ಮುಂದಿನ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ.

ಗಡಿ ಭದ್ರತಾ ಪಡೆ ಅರ್ಜಿ ಸಲ್ಲಿಕೆ ಹೇಗೆ?

  •  ಗಡಿ ಭದ್ರತಾ ಪಡೆಯ ಅಧಿಕೃತ ವೆಬ್‌ಸೈಟ್‌ https://rectt.bsf.gov.in ಗೆ ಭೇಟಿ ನೀಡಿ.

  •  ಓಪನ್‌ ಆದ ಪೇಜ್‌ನಲ್ಲಿ 'Recruitment Openings' ಎಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

  •  ನಂತರ ' BSF Group C Engineer's Recruitment 2021' ಎಂದಿರುವಲ್ಲಿ ಕ್ಲಿಕ್ ಮಾಡಿ.

  •  ನಂತರ ಓಪನ್ ಆಗುವ ಪೇಜ್‌ನಲ್ಲಿ 'Apply Here' ಆಯ್ಕೆ ಮೇಲೆ ಕ್ಲಿಕ್ ಮಾಡಿ.

  •  ಅಗತ್ಯ ಮಾಹಿತಿಗಳನ್ನು ನೀಡಿ, ಅರ್ಜಿ ಪೂರ್ಣಗೊಳಿಸಿ.


ಗಡಿ ಭದ್ರತಾ ಪಡೆ ಪ್ರಮುಕ ಲಿಂಕ್ ಗಳು :


ಅಧಿಕೃತ ವೆಬ್ಸೈಟ್ : Click Here

ಅಧಿಕೃತ ನೋಟಿಫಿಕೇಶನ್ : Click Here



logoblog

Thanks for reading Border Security Force Recruitment 2021

Previous
« Prev Post

No comments:

Post a Comment

Popular Posts

Followers