Footer Logo

January 20, 2022

One-liner Current affairs January 19

  ADMIN       January 20, 2022

Most Important GK One Liner Quiz Questions and Answer in English.

Current Affairs One Liner is to ease off your preparation we are providing you with a PDF that will contain the current affairs quiz of the whole week.
One-liners cover all the important events of the day in the short snippet. You can stay updated with all the current events with One-liners.


OneLiner Current affairs January 19

HI EVERYONE WELCOME OUR SITE KPSCJUNCTION.IN
FOLLOW OUR SITE FOR DAILY CURRENT AFFAIRS, CURRENT AFFAIRS QUIZ, NEWSPAPERS COLLECTIONS, IMPORTANT UPDATES REGARDING JOBS, STATE, AND CENTRAL JOB NOTIFICATIONS, MOCK TESTS UPCOMING ALL STATES.
SO KEEP VISITING ATTEND DAILY QUIZ WHICH WILL HELP YOU CLEAR UPCOMING EXAMS.

Daily CA One Liners - January 19,2022


1)13 ಸದಸ್ಯರನ್ನೊಳಗೊಂಡ ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪನೆ; ರಾಜ್ಯ ಸರ್ಕಾರ ಆದೇಶ


13 ಸದಸ್ಯರನ್ನೊಳಗೊಂಡ ಸೆಕೆಂಡರಿ ಅಗ್ರಿಕಲ್ಚರ್ (Secondary Agriculture) ನಿರ್ದೇಶನಾಲಯ ಸ್ಥಾಪಿಸಿ ರಾಜ್ಯ ಸರ್ಕಾರ(State Government) ಆದೇಶ ನೀಡಿದೆ. ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರ ಜೈವಿಕ ಸಂಪನ್ಮೂಲಗಳ ಪ್ರಾಥಮಿಕ ಹಾಗೂ ಉಪ ಉತ್ಪನ್ನಗಳನ್ನು ಕಚ್ಛಾ ವಸ್ತುವಾಗಿ ಬಳಸಿಕೊಂಡು ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡ್ ಮೂಲಕ ಮಾರುಕಟ್ಟೆ(Market) ಕಲ್ಪಿಸುವ ಉದ್ದೇಶದಿಂದ ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪಿಸಲಾಗಿದೆ. ಇಂದು ಕೃಷಿ ಇಲಾಖೆಯ ನಿರ್ದೇಶಕರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೃಷಿ ಸಚಿವ ಬಿ.ಸಿ. ಪಾಟೀಲರೊಂದಿಗೆ ಸಮಿತಿಯಲ್ಲಿ ಚರ್ಚಿಸಿ ನೀಡಿದ ಭರವಸೆಯಂತೆ ನಿರ್ದೇಶನಾಲಯ ಸ್ಥಾಪಿಸಲಾಗಿದೆ.


👉 ಸೆಕೆಂಡರಿ ಅಗ್ರಿಕಲ್ಚರ್ ಎಂದರೆ ಏನು?


ಗ್ರಾಮೀಣ ಮಟ್ಟದಲ್ಲಿ ಗುಡಿ ಕೈಗಾರಿಕೆ ಎಂದು ಪರಿಗಣಿಸಬಹುದಾದ ಚಟುವಟಿಕೆಯು ಸ್ಥಳೀಯ ಮತ್ತು ಸುತ್ತಮುತ್ತಲಿನ ರೈತರ ಆರ್ಥಿಕ ಮಟ್ಟ ಹೆಚ್ಚಳಕ್ಕೆ ಕೊಡುಗೆ ನೀಡುತ್ತದೆ ಇದನ್ನು ಸೆಕೆಂಡರಿ ಕೃಷಿ ಎಂದು ಕರೆಯುತ್ತಾರೆ. ಸ್ಥಳೀಯವಾಗಿ ಲಭ್ಯವಾಗುವ ಮೂಲ ಹಾಗೂ ಕಚ್ಚಾ ವಸ್ತುಗಳ್ನು ಮಾನವ ಶಕ್ತಿ ಕೌಶಲ್ಯಗಳ ಮೂಲವಾಗಿ ಸದಯೋಗಪಡಿಸಿಕೊಂಡು ಅಳವಡಿಸುವ ಸಮಗ್ರ ಚಟುವಟಿಕೆಗಳನ್ನು ಸೆಕೆಂಡರಿ ಕೃಷಿ ಎಂದು ಪರಿಗಣಿಸಬಹುದು. ಜೈವಿಕ ಗೊಬ್ಬರ ಘಟಕಗಳು, ಜೇನು ಸಾಕಣೆ, ಅಣಬೆ, ರೇಷ್ಮೆ ಹುಳು ಸಾಕಣೆ, ಸಾವಯವ ಬಣ್ಣ ಅಥವಾ ಡೈ ತಯಾರಿಕೆ, ನರ್ಸರಿ ಇತ್ಯಾದಿಗಳಂತಹ ಸಣ್ಣ ಪ್ರಮಾಣದ ಚಟುವಟಿಕೆಗಳು ಸೆಕೆಂಡರಿ ಕೃಷಿಗೆ ಉತ್ತಮ ಉದಾಹರಣೆಯಾಗಿದೆ. ಸ್ಥಳೀಯವಾಗಿ ಲಭ್ಯವಾಗುವ ಮೂಲ ಅಥವಾ ಕಚ್ಛಾ ವಸ್ತುಗಳನ್ನು ಮಾನವ ಶಕ್ತಿಯನ್ನು ಸದುಪಯೋಗಪಡಿಸಿಕೊಂಡು ಅಳವಡಿಸುವ ಸಮಗ್ರ ಚಟುವಟಿಕೆಯಾಗಿರುತ್ತದೆ


2)ಹೂಡಿಕೆದಾರರ ಅನುಕೂಲಕ್ಕೆ ‘ಸಾರಥಿ’ ಆ್ಯಪ್‌


ಷೇರುಪೇಟೆ ವಹಿವಾಟನ್ನು ಮೊಬೈಲ್‌ ಮೂಲಕ ನಡೆಸುವುದು ಹೆಚ್ಚಾಗುತ್ತಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ‘ಸಾರಥಿ’ (Saa₹thi) ಎನ್ನುವ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದೆ.

ಸೆಬಿ ಅಧ್ಯಕ್ಷ ಅಜಯ್‌ ತ್ಯಾಗಿ ಅವರು ಆ್ಯಪ್‌ ಬಿಡುಗಡೆ ಮಾಡಿ ಮಾತನಾಡಿದರು. ‌ಸೆಕ್ಯುರಿಟಿ ಮಾರುಕಟ್ಟೆಯ ಬಗ್ಗೆ ಅರಿವು ಮೂಡಿಸುವ ಜೊತೆಗೆ ಹೂಡಿಕೆದಾರರನ್ನು ಸಬಲಗೊಳಿಸುವ ಉದ್ದೇಶದಿಂದ ಈ ಆ್ಯಪ್‌ ಬಿಡುಗಡೆ ಮಾಡಲಾಗಿದೆ ಎಂದರು.ಕೆವೈಸಿ ಪ್ರಕ್ರಿಯೆ, ವಹಿವಾಟು ಮತ್ತು ಇತ್ಯರ್ಥ, ಮ್ಯೂಚುವಲ್ ಫಂಡ್‌, ಈಚಿನ ಮಾರುಕಟ್ಟೆ ಬೆಳವಣಿಗೆಗಳು, ಹೂಡಿಕೆದಾರರ ಸಮಸ್ಯೆ ಇತ್ಯರ್ಥಪಡಿಸುವ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳ ಬಗ್ಗೆ ಈ ಆ್ಯಪ್‌ ಅರಿವು ಮೂಡಿಸಲಿದೆ.

ಈಗ ಈ ಆ್ಯಪ್‌, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಲಭ್ಯವಿದೆ. ಮುಂಬರುವ ದಿನಗಳಲ್ಲಿ ಕೆಲವು ಪ್ರಾದೇಶಿಕ ಭಾಷೆಗಳಲ್ಲಿಯೂ ಈ ಆ್ಯಪ್‌ ಲಭ್ಯವಾಗಲಿದೆ ಎಂದು ತ್ಯಾಗಿ ತಿಳಿಸಿದ್ದಾರೆ. ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ನಲ್ಲಿ ಇದು ಲಭ್ಯವಿದೆ.


👉 Securities and Exchange Board of India


- Formed :- April 12, 1988

- Headquarters :- Mumbai, Maharashtra

- Chairman :- Ajay Tyagi


3)ಮೋದಿಗೆ ಶ್ರೀಲಂಕಾ ಶಾಸಕನಿಂದ ಪತ್ರ: 13ನೇ ತಿದ್ದುಪಡಿ ಜಾರಿಗೆ ಮಧ್ಯಸ್ಥಿಕೆ ವಹಿಸಲು ಮನವಿ.


ಶ್ರೀಲಂಕಾದ ಉತ್ತರ ಪ್ರಾಂತ್ಯದ ತಮಿಳು ಶಾಸಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ದೀರ್ಘಕಾಲದ ತಮಿಳು ಸಮಸ್ಯೆಗೆ ಶಾಶ್ವತವಾದ ರಾಜಕೀಯ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಮತ್ತು ವಿವಾದಾತ್ಮಕ 13 ನೇ ತಿದ್ದುಪಡಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಭಾರತ ಮಧ್ಯಪ್ರವೇಶ ಮಾಡಬೇಕೆಂದು ಕೋರಿದ್ದಾರೆ.

13ನೇ ತಿದ್ದುಪಡಿಯು 1987 ರ ಇಂಡೋ-ಲಂಕಾ ಒಪ್ಪಂದದ ಪರಿಣಾಮವಾಗಿದೆ, ಆಗಿನ ಶ್ರೀಲಂಕಾದ ಅಧ್ಯಕ್ಷ ಜೆಆರ್ ಜಯವರ್ಧನೆ ಮತ್ತು ಭಾರತದ ಪ್ರಧಾನಿ ರಾಜೀವ್ ಗಾಂಧಿಯವರು ಇದಕ್ಕೆ ಸಹಿ ಹಾಕಿದರು.


4)ಜ.27ರಂದು ವರ್ಚುವಲ್‌ ಭಾರತ-ಮಧ್ಯ ಏಷ್ಯಾ ಶೃಂಗಸಭೆ ಆಯೋಜಿಸಲಿದ್ದಾರೆ ಮೋದಿ.


ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ಮಧ್ಯ ಏಷ್ಯಾ ಶೃಂಗಸಭೆಯ ಮೊದಲ ಸಭೆಯನ್ನು ಜನವರಿ 27 ರಂದು ವರ್ಚುವಲ್ ರೂಪದಲ್ಲಿ ಆಯೋಜಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ  ಬುಧವಾರ ಪ್ರಕಟಿಸಿದೆ.

ವರ್ಚುವಲ್ ಕಾರ್ಯಕ್ರಮದಲ್ಲಿ ಕಝಾಕಿಸ್ತಾನ್, ಕರ್ಗಿಜ್ ಗಣರಾಜ್ಯ, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಅಧ್ಯಕ್ಷರು ಭಾಗವಹಿಸಲಿದ್ದಾರೆ.

ಇದು ಭಾರತ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ನಡುವೆ ನಾಯಕರ ಮಟ್ಟದಲ್ಲಿ ಈ ರೀತಿಯಲ್ಲಿ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2015 ರಲ್ಲಿ ಎಲ್ಲಾ ಮಧ್ಯ ಏಷ್ಯಾದ ದೇಶಗಳಿಗೆ ಐತಿಹಾಸಿಕ ಭೇಟಿ ನೀಡಿದ್ದರು.



5)Sania Mirza: ಸಾನಿಯಾ ಮಿರ್ಜಾ ತನ್ನ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ


ಸಾನಿಯಾ ಮಿರ್ಜಾ (Sania Mirza) ತನ್ನ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯನ್ ಓಪನ್ ಸೋಲಿನ ಬಳಿಕ ಸಾನಿಯಾ ಮಿರ್ಜಾ ಈ ಮಾಹಿತಿ ನೀಡಿದ್ದಾರೆ. 


ಭಾರತದ ಅತ್ಯಂತ ಯಶಸ್ವಿ ಮಹಿಳಾ ಟೆನಿಸ್ ಆಟಗಾರ್ತಿ. ಅವರು ಮಹಿಳೆಯರ ಡಬಲ್ಸ್‌ನಲ್ಲಿ ನಂಬರ್ ಒನ್ ರ್ಯಾಂಕಿಂಗ್ ತಲುಪಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.ಇವುಗಳಲ್ಲಿ ಮೂರು ಪ್ರಶಸ್ತಿಗಳನ್ನು ಮಹಿಳೆಯರ ಡಬಲ್ಸ್‌ನಲ್ಲಿ ಮತ್ತು ಮೂರು ಮಿಶ್ರ ಡಬಲ್ಸ್‌ನಲ್ಲಿ ಗೆದ್ದಿದ್ದಾರೆ. 

2009 ರಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಆಸ್ಟ್ರೇಲಿಯನ್ ಓಪನ್

2012 ರಲ್ಲಿ ಫ್ರೆಂಚ್ ಓಪನ್ ಮತ್ತು 2014 ರಲ್ಲಿ ಯುಎಸ್ ಓಪನ್. ಅದೇ ಸಮಯದಲ್ಲಿ, ಮಹಿಳೆಯರ ಡಬಲ್ಸ್‌ನಲ್ಲಿ, 2015 ರಲ್ಲಿ ವಿಂಬಲ್ಡನ್ ಮತ್ತು ಯುಎಸ್ ಓಪನ್, 2016 ರಲ್ಲಿ ಆಸ್ಟ್ರೇಲಿಯನ್ ಓಪನ್ ಮುಡಿಗೇರಿಸಿಕೊಂಡಿದ್ದರು


ಡಬ್ಲ್ಯುಟಿಎ ಪ್ರಶಸ್ತಿಯನ್ನು ಗೆದ್ದ ಭಾರತದ ಏಕೈಕ ಇಬ್ಬರು ಮಹಿಳಾ ಟೆನಿಸ್ ಆಟಗಾರ್ತಿಯರಲ್ಲಿ ಸಾನಿಯಾ ಮಿರ್ಜಾ ಕೂಡ ಒಬ್ಬರು ಮತ್ತು ಸಿಂಗಲ್ಸ್ ಶ್ರೇಯಾಂಕಗಳಲ್ಲಿ ಅಗ್ರ 100 ತಲುಪಿದ ಏಕೈಕ ಭಾರತೀಯ ಆಟಗಾರ್ತಿಯಾಗಿದ್ದಾರೆ.


2007ರಲ್ಲಿ ವಿಶ್ವದ 27ನೇ ಶ್ರೇಯಾಂಕ ಪಡೆಯುವ ಮೂಲಕ ಭಾರತದ ಮಹಿಳಾ ಟೆನಿಸ್‌ಗೆ ಹೊಸ ಮೆರಗು ತಂದಿದ್ದರು. ಏಕೆಂದರೆ ಭಾರತದಿಂದ ಮಹಿಳಾ ಆಟಗಾರ್ತಿಯೊಬ್ಬರು ಸಿಂಗಲ್ಸ್‌ನಲ್ಲಿ ಅತ್ಯಧಿಕ ಶ್ರೇಯಾಂಕ ಹೊಂದಿದ ಆಟಗಾರ್ತಿ ಎಂದರೆ ಅದು ಸಾನಿಯಾ ಮಿರ್ಜಾ ಮಾತ್ರ!.


👉 Awards 


- Arjuna Award (2004)

- WTA Newcomer of the Year (2005)

- Padma Shri (2006)

- Major Dhyan Chand Khel Ratna (2015)

- BBC list of 100 inspiring women (2015)

- Padma Bhushan (2016)

- NRI of the Year (2016)

- In the year 2014, the government of Telangana appointed Sania Mirza as the brand ambassador of the state. 

Telangana Chief Minister

 K. Chandrashekhar Rao

logoblog

Thanks for reading One-liner Current affairs January 19

Previous
« Prev Post

No comments:

Post a Comment

Popular Posts

Followers