Footer Logo

December 16, 2021

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಲ್ಲಿ ಲೆಕ್ಕ ಸಹಾಯಕ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

  ADMIN       December 16, 2021

 ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಲ್ಲಿ ಲೆಕ್ಕ ಸಹಾಯಕ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ



ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತದಿಂದ ಅವವಶ್ಯಕವಿರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆಗೊಂಡಿದೆ. ಸದರಿ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.


ಮೊದಲಿಗೆ ಅಭ್ಯರ್ಥಿಯನ್ನು ಎರಡು ವರ್ಷ ಗುತ್ತಿಗೆ ಅವಧಿಗೆ ನೇಮಕ ಮಾಡಿಕೊಳ್ಳಲಿದ್ದು, ನಂತರ ಅಭ್ಯರ್ಥಿಯ ಕಾರ್ಯಕ್ಷಮತೆಯನ್ನು ಆಧರಿಸಿ ಪ್ರತಿ ವರ್ಷ ಉದ್ಯೋಗ ಅವಧಿ ಮುಂದುವರೆಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಹುದ್ದೆಗಳ ವಿವರ : ಕುಸ್ಸೆಂಪ್ ಯೋಜನೆ

  1. ಕಾರ್ಯ ನಿರ್ವಾಹಕ ಅಭಿಯಂತರರು 02
  2. ಸಹಾಯಕ ಅಭಿಯಂತರರು (ಪರಿಸರ) 01
  3. ಲೆಕ್ಕಪತ್ರ ಅಧೀಕ್ಷಕರು 01
  4. ಲೆಕ್ಕ ಸಹಾಯಕರು 01
  5. ಡಿಇಒ / ಕಂಪ್ಯೂಟರ್ ಆಪರೇಟರ್ 02
  6. ಒಟ್ಟು ಹುದ್ದೆಗಳ ಸಂಖ್ಯೆ 07


ಹುದ್ದೆಗಳ ವಿವರ : ಹೈದೆರಾಬಾದ್-ಕರ್ನಾಟಕ ಮೀಸಲಾತಿ ಹೊರತುಪಡಿಸಿ ಇತರ ಕಛೇರಿಗಳಲ್ಲಿ ಇರುವ ಹುದ್ದೆಗಳ ವಿವರ


  1. ಅಧೀಕ್ಷಕರ ಅಭಿಯಂತರರು 1
  2. ಸಹಾಯಕ ಪ್ರಧಾನ ವ್ಯವಸ್ಥಾಪಕರು 1
  3. ಕಾರ್ಯನಿರ್ವಾಹಕ ಅಭಿಯಂತರರು 2
  4. ಸಹಾಯಕ ಕಾರ್ಯನಿರ್ವಾಹ ಅಭಿಯಂತರರು 4
  5. ಸಹಾಯಕ ಅಭಿಯಂತರರು (ಪರಿಸರ) 2
  6. ವ್ಯವಸ್ಥಾಪಕರು 1
  7. ಸಾರ್ವಜನಿಕ ಸಂಪರ್ಕ ಅಧಿಕಾರಿ 1
  8. ಲೆಕ್ಕಪತ್ರ ಅಧೀಕ್ಷಕರು 1
  9. ಲೆಕ್ಕ ಸಹಾಯಕರು 2
  10. ಡಿಇಒ/ಕಂಪ್ಯೂಟರ್ ಆಪರೇಟರ್ 4



ಹುದ್ದೆಗಳ ವಿವರ

ಲೆಕ್ಕಿಗ / ಹಿರಿಯ ಕಾರ್ಯನಿರ್ವಾಹಕ ಸಹಾಯಕರು 1

ಹುದ್ದೆಗಳ ವಿವರ : 9 ಪಟ್ಟಣಗಳ ಯೋಜನೆ

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ

ಕಾರ್ಯನಿರ್ವಾಹಕ ಅಭಿಯಂತರರು 1

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು 1

ಸಹಾಯಕ ಅಭಿಯಂತರರು (ನೀರು ಸರಬರಾಜು/ಸಿವಿಲ್) 1


ವೇತನ ಶ್ರೇಣಿ:

ಈ ಮೇಲಿನ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರೂ.31,637 ರಿಂದ ರೂ.1,08,852 ವರೆಗೆ ಮಾಸಿಕ ವೇತನ ಸಿಗಲಿದೆ. ಯಾವ್ಯಾವ ಹುದ್ದೆಗೆ ವೇತನ ಎಷ್ಟು ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.

ಒಬ್ಬ ಅಭ್ಯರ್ಥಿಯು ಒಂದೇ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿಗಳಲ್ಲಿ ಅಧಿಕೃತ ಇ-ಮೇಲ್ ವಿಳಾಸ / ಮೊಬೈಲ್ ಸಂಖ್ಯೆ ಹಾಗೂ ವಿಳಾಸವನ್ನು ತಪ್ಪದೇ ನಮೂದಿಸಬೇಕು.


ನೇಮಕಾತಿ ವಿಧಾನ

ವಿದ್ಯಾರ್ಹತೆ, ಮೆರಿಟ್‌, ಅನುಭವದ ಆಧಾರದ ಮೇಲೆ ಮೌಖಿಕ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.


ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿಯನ್ನು ಆನ್‌ಲೈನ್‌ ಮೂಲಕ ನಿಗಮದ ಅಧಿಕೃತ ಅಂತರ್ಜಾಲ www.kuidfc.com ನಲ್ಲಿ ಭೇಟಿ ನೀಡಿ ಸಲ್ಲಿಸಬೇಕು. ಖುದ್ದಾಗಿ ಅಥವಾ ಅಂಚೆ/ಕೊರಿಯರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.


ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 15-12-2021

ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31-12-2021


ಪ್ರಮುಖ link ಗಳು :

Website 

Download Notification PDF



logoblog

Thanks for reading ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಲ್ಲಿ ಲೆಕ್ಕ ಸಹಾಯಕ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

Previous
« Prev Post

No comments:

Post a Comment

Popular Posts

Followers