Footer Logo

January 30, 2021

Iocl Je Recruitment 2021 Apply Online For Je Assistant Posts

  ADMIN       January 30, 2021

ಐಒಸಿಎಲ್ ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟಂಟ್ IV (ಪ್ರೊಡಕ್ಷನ್) ಪೋಸ್ಟ್‌ಗಳಿಗೆ ಭಾರತೀಯ ಯಂಗ್ ಅಂಡ್ ಎನರ್ಜಿಟಿಕ್‌ ಪ್ರಜೆಗಳಿಂದ ಆನ್‌ಲೈನ್‌ ಅಪ್ಲಿಕೇಶನ್‌ ಆಹ್ವಾನಿಸಿದೆ. ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.

 
iocl je recruitment 2021

ಹೈಲೈಟ್ಸ್‌:

  • ಐಒಸಿಎಲ್ ಜೆಇ ಅಧಿಸೂಚನೆ
  • ಜೆಇ ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಡಿಪ್ಲೊಮ, ಬಿಎಸ್ಸಿ ವಿದ್ಯಾರ್ಹತೆಯುಳ್ಳವರು ಅರ್ಜಿ ಸಲ್ಲಿಸಿ
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್, ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟಂಟ್ IV (ಪ್ರೊಡಕ್ಷನ್) ಪೋಸ್ಟ್‌ಗಳಿಗೆ ಭಾರತೀಯ ಯಂಗ್ ಅಂಡ್ ಎನರ್ಜಿಟಿಕ್‌ ಪ್ರಜೆಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಸಂಬಂಧಿಸಿದ ಇನ್ನಷ್ಟು ಹೆಚ್ಚಿನ ಮಾಹಿತಿ ಈ ಕೆಳಗಿನಂತೆ ನೀಡಲಾಗಿದೆ.

ಈ ಹುದ್ದೆಗಳಿಗೆ ಜನವರಿ 28, 2021 ರಿಂದ ಫೆಬ್ರವರಿ 19, 2021 ರವರೆಗೆ ಅಫೀಶಿಯಲ್ ವೆಬ್‌ಸೈಟ್‌ www.iocrefrecruit.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ವೇತನ ಶ್ರೇಣಿ 25,000 - 1,05,000 ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಆರಂಭ ದಿನಾಂಕ 28-01-2021
ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ 19-02-2021
ಆನ್‌ಲೈನ್‌ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿಕೊಳ್ಳಲು ಕೊನೆ ದಿನಾಂಕ 27-02-2021
ಲಿಖಿತ ಪರೀಕ್ಷೆ ದಿನಾಂಕ (ನಿರೀಕ್ಷಿತ) 28-02-2021
ಲಿಖಿತ ಪರೀಕ್ಷೆ ಫಲಿತಾಂಶ ದಿನಾಂಕ 09-03-2021
ಎಸ್‌ಪಿಪಿಟಿ ಪರೀಕ್ಷೆ ದಿನಾಂಕ (ನಿರೀಕ್ಷಿತ) 15/16-03-2021



ವಯೋಮಿತಿ ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಸಾಮಾನ್ಯ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ 26 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಇತರೆ ವರ್ಗದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರಿ ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ವಿದ್ಯಾರ್ಹತೆ
3 ವರ್ಷದ ಡಿಪ್ಲೊಮ ಕೋರ್ಸ್‌ ಅನ್ನು ಕೆಮಿಕಲ್ / ರೆಫಿನರಿ ಮತ್ತು ಪೆಟ್ರೊ ಕೆಮಿಕಲ್ ಇಂಜಿನಿಯರಿಂಗ್ ಅಥವಾ ಬಿ.ಎಸ್ಸಿ ವಿದ್ಯಾರ್ಹತೆಯನ್ನು (ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಅಥವಾ ಇಂಡಸ್ಟ್ರಿಯಲ್ ಕೆಮಿಸ್ಟ್ರಿ) ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಪಡೆದಿರಬೇಕು. ಈ ವಿದ್ಯಾರ್ಹತೆಗಳನ್ನು ಸಾಮಾನ್ಯ / EWS / ಒಬಿಸಿ ವರ್ಗದ ಅಭ್ಯರ್ಥಿಗಳು ಶೇ.50 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಎಸ್‌ಸಿ / ಎಸ್‌ಟಿ ವರ್ಗದ ಅಭ್ಯರ್ಥಿಗಳು ಶೇ.45 ಅಂಕಗಳೊಂದಿಗೆ ಪಾಸ್‌ ಮಾಡಿರಬೇಕು.



ಕಾರ್ಯಾನುಭವ
ಪಂಪ್ ಹೌಸ್, ಫೈಯರ್ಡ್‌ ಹೀಟರ್, ಕಂಪ್ರೆಸರ್, ಡಿಸ್ಟಿಲೇಶನ್ ಕಾಲಂ, ರಿಯಾಕ್ಟರ್, ಹೀಟ್ ಎಕ್ಸ್‌ಚೇಂಜರ್ ಮತ್ತು ಇತರೆ ಕಾರ್ಯಾನುಭವವನ್ನು ಪೆಟ್ರೋಲಿಯಂ ರಿಫೈನರಿ / ಪೆಟ್ರೋಕೆಮಿಕಲ್ಸ್‌ / ಫರ್ಟಿಲೈಜರ್ / ಹೆವಿ ಕೆಮಿಕಲ್ಸ್‌ / ಗ್ಯಾಸ್ ಪ್ರೊಸೆಸಿಂಗ್ ಇಂಡಸ್ಟ್ರಿಗಳಲ್ಲಿ ಕನಿಷ್ಠ ಒಂದು ವರ್ಷ ಪಡೆದಿರಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ?
ಲಿಖಿತ ಪರೀಕ್ಷೆ, ಕೌಶಲ ಪರೀಕ್ಷೆ, ದೈಹಿಕ ಅರ್ಹತಾ ಪರೀಕ್ಷೆ, ಪ್ರಾವೀಣ್ಯತೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಹುದ್ದೆಗಳಿಗೆ ವರ್ಗವಾರು ಮೀಸಲಾತಿ ಅಡಿಯಲ್ಲಿ ಆಯ್ಕೆಪ್ರಕ್ರಿಯೆ ನಡೆಸಲಾಗುತ್ತದೆ. ಎಸ್‌ಪಿಪಿಟಿ ಪರೀಕ್ಷೆಗಳಿಗೆ ಆಯ್ಕೆ ಆಗಲು ಅಭ್ಯರ್ಥಿಯು ಕನಿಷ್ಠ 40 ಶೇಕಡ ಅಂಕಗಳನ್ನು ಲಿಖಿತ ಪರೀಕ್ಷೆಯಲ್ಲಿ ಪಡೆದಿರಬೇಕು.


ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಅಭ್ಯರ್ಥಿಗಳು ಅಪ್ಲಿಕೇಶನ್‌ ಅನ್ನು http://www.iocrefrecruit.in ಗೆ ಭೇಟಿ ನೀಡಿ ಸಲ್ಲಿಸಬೇಕು. ನಂತರ ಡೌನ್‌ಲೋಡ್‌ ಮಾಡಿ ಪ್ರಿಂಟ್‌ ತೆಗೆದುಕೊಂಡ ಅಪ್ಲಿಕೇಶನ್‌ಗೆ ಸಹಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ವಿಳಾಸ : 'Dy, General Manager (HR), Barauni Refinery, P.O Barauni Oil Refinery, Begusarai, Bihar - 851114' ಕ್ಕೆ ಕಳುಹಿಸಬೇಕು.

IOCL Recruitment Notification - 2021

ಉದ್ಯೋಗ ವಿವರ

ಹುದ್ದೆಯ ಹೆಸರು ಜೆಇ ಹುದ್ದೆಗಳ ನೇಮಕ
ವಿವರ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಅಧಿಸೂಚನೆ
ಪ್ರಕಟಣೆ ದಿನಾಂಕ 2021-01-28
ಕೊನೆ ದಿನಾಂಕ 2021-02-19
ಉದ್ಯೋಗ ವಿಧ Full Time
ಉದ್ಯೋಗ ಕ್ಷೇತ್ರ ಸರ್ಕಾರಿ ವಲಯ
ವೇತನ ವಿವರ INR 25000 to 105000 /Month

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲ --
ವಿದ್ಯಾರ್ಹತೆ ಡಿಪ್ಲೊಮ / ಬಿಎಸ್ಸಿ
ಕಾರ್ಯಾನುಭವ 1 year

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್
ವೆಬ್‌ಸೈಟ್‌ ವಿಳಾಸ https://iocl.com/
ಸಂಸ್ಥೆ ಲೋಗೋ

ಉದ್ಯೋಗ ಸ್ಥಳ

ವಿಳಾಸ ಬರೌನಿ ಆಯಿಲ್ ರಿಫೈನರಿ
ಸ್ಥಳ ಬೇಗುಸಾರೈ
ಪ್ರದೇಶ ಬಿಹಾರ್
ಅಂಚೆ ಸಂಖ್ಯೆ 851114
ದೇಶ IND
 
logoblog

Thanks for reading Iocl Je Recruitment 2021 Apply Online For Je Assistant Posts

Previous
« Prev Post

No comments:

Post a Comment

Popular Posts

Followers