IPL ಇತಿಹಾಸದಲ್ಲೇ ಅತ್ಯಧಿಕ ಬೆಲೆಗೆ ಬಿಕರಿಯಾದ ಮೋರಿಸ್: ಬೆಲೆ ಎಷ್ಟು ಗೊತ್ತೇ?
ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ರಿಸ್ ಮೋರಿಸ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಗೆ ಖರೀದಿಯಾಗಿದ್ದಾರೆ.
33 ವರ್ಷದ ಮೋರಿಸ್ ಅವರ ಮೂಲ ಬೆಲೆ ₹ 75 ಲಕ್ಷ. ಆದರೆ, ರಾಜಸ್ಥಾನ್ ರಾಯಲ್ಸ್ ₹ 16.25 ಕೋಟಿಗೆ ಅವರನ್ನು ಖರೀದಿ ಮಾಡಿದೆ.
ಐಪಿಎಲ್‌ನಲ್ಲಿ ಈ ಹಿಂದೆ ಅತ್ಯಂತ ದುಬಾರಿ ಬೆಲೆಗೆ ಬಿಕರಿಯಾದ ಆಟಗಾರ ಯುವರಾಜ್ ಸಿಂಗ್. ಅವರನ್ನು ದೆಹಲಿ ಕ್ಯಾಪಿಟಲ್ಸ್ (ದೆಹಲಿ ಡೇರ್‌ಡೆವಿಲ್ಸ್) 2015 ರಲ್ಲಿ ₹ 16 ಕೋಟಿಗೆ ಖರೀದಿಸಿತ್ತು.
ಆಲ್‌ರೌಂಡರ್ ಕ್ರಿಸ್ ಮೋರಿಸ್ ಈ ಹಿಂದೆ ಆರ್‌ಸಿಬಿ ತಂಡದಲ್ಲಿದ್ದರು.
ಈ ಬಾರಿಯ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಸಣ್ಣ ಪ್ರಮಾಣದ್ದಾಗಿದೆ. ಆದ್ದರಿಂದಲೇ ಲಭ್ಯವಿರುವ ಒಟ್ಟು 61 ಸ್ಥಾನಗಳ ಸಲುವಾಗಿ 292 ಆಟಗಾರರ ನಡುವೆ ಪೈಪೋಟಿಯಿದೆ. ಐಪಿಎಲ್ 2020 ಆವೃತ್ತಿಗೆ ಮೆಗಾ ಆಕ್ಷನ್ (ಬೃಹತ್ ಮಟ್ಟದ ಹರಾಜು) ನಡೆಯಲಿದ್ದು ಎಲ್ಲಾ ತಂಡಗಳು ಸಂಪೂರ್ಣ ಹೊಸ ತಂಡಗಳನ್ನು ಕಟ್ಟಬೇಕಾಗುತ್ತದೆ.
ಈ ಬಾರಿ ಒಟ್ಟು 11 ಆಟಗಾರರು 2 ಕೋಟಿ ರೂ. ಮೂಲ ಬೆಲೆ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಶಕಿಬ್ ಲ್ ಹಸನ್ ಹಾಗೂ ಹರ್ಭಜನ್ ಸಿಂಗ್ ಅವರಂತಹ ಘಟಾನುಘಟಿ ಆಟಗಾರರು ಇದ್ದಾರೆ
ಆಟಗಾರರ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆ ಪಡೆದಿರುವ ಆಟಗಾರರು
1. ಹರ್ಭಜನ್ ಸಿಂಗ್ (ಭಾರತ)
2. ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ)
3. ಕೇದಾರ್ ಜಾಧವ್ (ಭಾರತ)
4. ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ)
5. ಶಕಿಬ್ ಅಲ್ ಹಸನ್ (ಬಾಂಗ್ಲಾದೇಶ)
6. ಮೊಯೀನ್ ಅಲಿ (ಇಂಗ್ಲೆಂಡ್)
7. ಸ್ಯಾಮ್ ಬಿಲ್ಲಿಂಗ್ಸ್ (ಇಂಗ್ಲೆಂಡ್)
8. ಲಿಯಾಮ್ ಪ್ಲಂಕೆಟ್ (ಇಂಗ್ಲೆಂಡ್)
9. ಜೇಸನ್ ರಾಯ್ (ಇಂಗ್ಲೆಂಡ್)
10. ಮಾರ್ಕ್ ವುಡ್ (ಇಂಗ್ಲೆಂಡ್)
11. ಕಾಲಿನ್ ಇಂಗ್ರಮ್ (ದಕ್ಷಿಣ ಆಫ್ರಿಕಾ)
No comments:
Post a Comment