ಡೆನ್ಮಾರ್ಕ್‌ನ 21 ವರ್ಷದ ಚೆಲುವೆ ವಿಕ್ಟೋರಿಯಾ ಕಾಜೇರ್ ಮಿಸ್ ಯುನಿವರ್ಸ್–2024
ಡೆನ್ಮಾರ್ಕ್‌ನ
21 ವರ್ಷದ ಚೆಲುವೆ ವಿಕ್ಟೋರಿಯಾ ಕಾಜೇರ್ (Victoria Kjaer Theilvig) ‘ಮಿಸ್
ಯುನಿವರ್ಸ್– 2024’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಶನಿವಾರ ಮೆಕ್ಸಿಕೊದಲ್ಲಿ ಮಿಸ್ ಯುನಿವರ್ಸ್ 2024 ಸೌಂದರ್ಯ ಸ್ಪರ್ಧೆಯ ಫೈನಲ್ ಕಾರ್ಯಕ್ರಮ ನಡೆಯಿತು.
ಇದೇ ಮೊದಲ ಬಾರಿಗೆ ಯುವತಿಯೊಬ್ಬಳು ಡೆನ್ಮಾರ್ಕ್‌ನಿಂದ ಮಿಸ್ ಯುನಿವರ್ಸ್ ಪಟ್ಟ ಪಡೆದಿದ್ದಾರೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ವ್ಯವಹಾರ
ಹಾಗೂ ಮಾರುಕಟ್ಟೆ ಕೌಶಲದಲ್ಲಿ ಪದವೀಧರೆಯಾಗಿರುವ ವಿಕ್ಟೋರಿಯಾ ಡೆನ್ಮಾರ್ಕ್‌ನ
ಕೂಪನ್‌ಹೇಗೆನ್‌ನಲ್ಲಿ ಜನಿಸಿದ್ದಾರೆ. ಅಂತರರಾಷ್ಟ್ರೀಯ ನೃತ್ಯಪಟುವೂ ಆಗಿರುವ ಅವರು ಯುವ
ಉದ್ಯಮಿಯೂ ಹೌದು.
ಭಾರತದ ರಿಯಾ ಸಿಂಘಾ ಅವರು ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಸೋಲು ಕಂಡಿದ್ದಾರೆ.
No comments:
Post a Comment