Footer Logo

October 6, 2021

SBI ನಿಂದ 2056 ಪಿಒ ಹುದ್ದೆಗಳ ನೇಮಕ: ಪರೀಕ್ಷೆಯ ಹಂತಗಳು, ಮಾದರಿ ಬಗ್ಗೆ ಇಲ್ಲಿ ತಿಳಿಯಿರಿ..

  ADMIN       October 6, 2021

 SBI ನಿಂದ 2056 ಪಿಒ ಹುದ್ದೆಗಳ ನೇಮಕ: ಪರೀಕ್ಷೆಯ ಹಂತಗಳು, ಮಾದರಿ ಬಗ್ಗೆ ಇಲ್ಲಿ ತಿಳಿಯಿರಿ..



ಭಾರತೀಯ ಸ್ಟೇಟ್‌ ಬ್ಯಾಂಕ್‌ ಇದೀಗ ತಾನೆ 2056 ಪ್ರೊಬೇಷನರಿ ಆಫೀಸರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಿಗೆ ಅಕ್ಟೋಬರ್ 25 ರವರೆಗೆ ಆನ್‌ಲೈನ್‌ ಅರ್ಜಿ ಸ್ವೀಕರಿಸಲಾಗುತ್ತದೆ. ನೇರ ನೇಮಕಾತಿ ಪ್ರಕ್ರಿಯೆಯಾದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎಸ್‌ಬಿಐ ನಡೆಸಿ, ಪಿಒ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗೆ ಪರೀಕ್ಷೆಯ ಹಂತಗಳು ಎಷ್ಟಿರುತ್ತವೆ, ಪರೀಕ್ಷೆ ಮಾದರಿ ಹೇಗಿರುತ್ತದೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.

ವರ್ಗವಾರು ಪ್ರೊಬೇಷನರಿ ಆಫೀಸರ್ ಖಾಲಿ ಹುದ್ದೆಗಳ ವಿವರ


ಪ್ರೊಬೇಷನರಿ ಆಫೀಸರ್ (ಸಾಮಾನ್ಯ ವರ್ಗ) : 810

ಪ್ರೊಬೇಷನರಿ ಆಫೀಸರ್ (ಒಬಿಸಿ) : 560

ಪ್ರೊಬೇಷನರಿ ಆಫೀಸರ್ (ಎಸ್‌ಸಿ ) : 324

ಪ್ರೊಬೇಷನರಿ ಆಫೀಸರ್ (ಎಸ್‌ಟಿ ) : 162

ಪ್ರೊಬೇಷನರಿ ಆಫೀಸರ್ (EWS) : 200

SBI PO ನೇಮಕಾತಿ ಹಂತಗಳು:

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು ಪಿಒ ಹುದ್ದೆಗಳ ಭರ್ತಿಗೆ ಮೂರು ಹಂತದ ಪರೀಕ್ಷೆಗಳನ್ನು ನಡೆಸಲಿದೆ. ಅವುಗಳೆಂದರೆ


  • ಪೂರ್ವಭಾವಿ ಪರೀಕ್ಷೆ ( Phase-I)
  • ಮುಖ್ಯ ಪರೀಕ್ಷೆ ( Phase-II)
  • ಸಂದರ್ಶನ ಪರೀಕ್ಷೆ ( Phase-III)
  • ​ಪ್ರಿಲಿಮ್ಸ್‌ ಪರೀಕ್ಷೆ ( Phase-I)

ಎಸ್‌ಬಿಐ ಪಿಒ ಪರೀಕ್ಷೆಯು 100 ಅಂಕಗಳಿಗೆ ಆಬ್ಜೆಕ್ಟಿವ್ ಟೆಸ್ಟ್‌ ಅನ್ನು ಹೊಂದಿರುತ್ತದೆ. ಆನ್‌ಲೈನ್ ಪರೀಕ್ಷೆ ಇದಾಗಿರುತ್ತದೆ. ಈ ಪತ್ರಿಕೆಯು ಮೂರು ಪ್ರತ್ಯೇಕ ಸೆಕ್ಷನ್‌ಗಳಲ್ಲಿ ಪ್ರಶ್ನೆಗಳನ್ನು ಹೊಂದಿರುತ್ತದೆ.


ಇಂಗ್ಲಿಷ್ ಭಾಷೆ - 30 ಪ್ರಶ್ನೆ

ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ - 35 ಪ್ರಶ್ನೆ

ರೀಸನಿಂಗ್ ಎಬಿಲಿಟಿ - 35 ಪ್ರಶ್ನೆ

ಒಟ್ಟು 100 ಪ್ರಶ್ನೆಗಳನ್ನು ಕೇಳಲಿದ್ದು, ಪ್ರತಿ ಪ್ರಶ್ನೆಗೆ ಒಂದು ಅಂಕಗಳನ್ನು ನೀಡಲಾಗುತ್ತದೆ. 1 ಗಂಟೆ ಅವಧಿ ಪರೀಕ್ಷೆ ನಡೆಯಲಿದ್ದು, ಪ್ರತಿ ಸೆಕ್ಷನ್‌ಗೆ 20 ನಿಮಿಷ ಕಾಲಾವಕಾಶ ಇರುತ್ತದೆ.

ವರ್ಗಾವಾರು ಅತಿ ಹೆಚ್ಚು ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ 1-10 ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ ಮುಖ್ಯ ಪರೀಕ್ಷೆ ಬರೆಯಲು ಅರ್ಹತೆ ನೀಡಲಾಗುತ್ತದೆ.

​ಮುಖ್ಯ ಪರೀಕ್ಷೆ ( Phase-II):


  • ಎಸ್‌ಬಿಐ ಪಿಒ ಮುಖ್ಯ ಪರೀಕ್ಷೆಯು ಆನ್‌ಲೈನ್‌ ಮೂಲಕ ನಡೆಯಲಿದೆ. 200 ಅಂಕಗಳಿಗೆ ಆಬ್ಜೆಕ್ಟಿವ್ ಟೆಸ್ಟ್‌, 50 ಅಂಕಗಳಿಗೆ ವಿವರಣಾತ್ಮಕ ಪರೀಕ್ಷೆ ಇರುತ್ತದೆ. ವಿವರಣಾತ್ಮಕ ಉತ್ತರವನ್ನು ಕಂಪ್ಯೂಟರ್‌ನಲ್ಲೇ ಟೈಪಿಸಬೇಕಿರುತ್ತದೆ.
  • ಮುಖ್ಯ ಪರೀಕ್ಷೆ 3 ಗಂಟೆಗಳ ಕಾಲ ಇರುತ್ತದೆ. 4 ಸೆಕ್ಷನ್‌ ಪ್ರಶ್ನೆಗಳು ಇರುತ್ತವೆ.
  • ರೀಸನಿಂಗ್ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್ - 45 ಪ್ರಶ್ನೆ (60 ಗರಿಷ್ಠ ಅಂಕ)
  • ಡಾಟಾ ಅನಾಲಿಸಿಸ್ ಮತ್ತು ಇಂಟರ್‌ಪ್ರೆಟೇಶನ್‌ - 35 ಪ್ರಶ್ನೆ ( 60 ಗರಿಷ್ಠ ಅಂಕ)
  • ಜೆನೆರಲ್ /ಎಕಾನಮಿ/ ಬ್ಯಾಂಕಿಂಗ್ ಅವಾರ್ನೆಸ್ - 40 ಪ್ರಶ್ನೆ ( 40 ಗರಿಷ್ಠ ಅಂಕಗಳು)
  • ಇಂಗ್ಲಿಷ್ ಭಾಷೆ - 35 ಪ್ರಶ್ನೆ ( 40 ಗರಿಷ್ಠ ಅಂಕಗಳು)
  • ಒಟ್ಟು 155 ಪ್ರಶ್ನೆಗಳನ್ನು ಕೇಳಲಾಗುತ್ತದೆ.

ವಿವರಣಾತ್ಮಕ ಪರೀಕ್ಷೆ


  • 50 ಅಂಕಗಳಿಗೆ 30 ನಿಮಿಷ ವಿವರಣಾತ್ಮಕ ಪರೀಕ್ಷೆ ಇರುತ್ತದೆ. ಇದು ಇಂಗ್ಲಿಷ್ ಭಾಷೆಗೆ ಸಂಬಂಧಿಸಿದ ಪರೀಕ್ಷೆ ಆಗಿದ್ದು, ಲೆಟರ್ ರೈಟಿಂಗ್ ಮತ್ತು ಪ್ರಬಂಧ ಬರೆಯುವುದಾಗಿರುತ್ತದೆ.
  • ಪ್ರಿಲಿಮ್ಸ್‌ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ ನೆಗೆಟಿವ್ ಅಂಕ ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ನೆಗೆಟಿವ್ ಅಂಕಗಳನ್ನು ನೀಡಲಾಗುತ್ತದೆ. ಸರಿಯಾಗಿ ಉತ್ತರ ತಿಳಿಯದೇ ಉತ್ತರ ಖಾಲಿ ಬಿಟ್ಟಲ್ಲಿ ಪೆನಾಲ್ಟಿ ಇರುವುದಿಲ್ಲ.


​ಸಂದರ್ಶನ ಪರೀಕ್ಷೆಗೆ ಆಯ್ಕೆ ಹೇಗೆ?

  • ಮುಖ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳನ್ನು ವರ್ಗಾವಾರು ಗರಿಷ್ಠ ಅಂಕ ಪಡೆದವರನ್ನು ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ 1:3 ಅನುಪಾತದಲ್ಲಿ ಸಂದರ್ಶನ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. 
  • ಯಾವುದೇ ರೀತಿಯ ಕಟ್‌ಆಫ್‌ ಅಂಕ ನಿಗಧಿ ಇರುವುದಿಲ್ಲ.


ಸಂದರ್ಶನ ಪರೀಕ್ಷೆ


  • ಸಂದರ್ಶನ ಪರೀಕ್ಷೆಯನ್ನು 50 ಅಂಕಗಳಿಗೆ ನಡೆಸಲಾಗುತ್ತದೆ. 30 ಅಂಕಗಳಿಗೆ ಸಂದರ್ಶನ ಮತ್ತು 20 ಅಂಕಗಳಿಗೆ ಗುಂಪು ಚರ್ಚೆ ಅಥವಾ 50 ಅಂಕಗಳಿಗೆ ಸಂದರ್ಶನ ನಡೆಸುವ ಸಾಧ್ಯತೆ ಇರುತ್ತದೆ.
  • ಸಂದರ್ಶನ ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳನ್ನು ಅಭ್ಯರ್ಥಿಗಳು ಗಳಿಸಬೇಕು. ಇಲ್ಲವಾದಲ್ಲಿ ಅಂತಿಮ ಆಯ್ಕೆಪಟ್ಟಿಗೆ ಸೆಲೆಕ್ಟ್‌ ಮಾಡುವ ಅವಕಾಶ ಇರುವುದಿಲ್ಲ.

ಅಂತಿಮ ಆಯ್ಕೆ ಪ್ರಕ್ರಿಯೆ:


  • ಸಂದರ್ಶನದ ನಂತರ ಅಂತಿಮ ಆಯ್ಕೆಪಟ್ಟಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುತ್ತದೆ. ಆ ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು. ಇವರು ತಮ್ಮ ವರ್ಗದ ಬಗ್ಗೆ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕಾಗುತ್ತದೆ.
  • ಪ್ರಿಲಿಮ್ಸ್‌ ಪರೀಕ್ಷೆ ಅಂಕಗಳನ್ನು ಅಂತಿಮ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಮುಖ್ಯ ಪರೀಕ್ಷೆ ಮಾತ್ರ ಪರಿಗಣಿಸಲಾಗುತ್ತದೆ.
  • ಅಂತಿಮ ಆಯ್ಕೆಪಟ್ಟಿಗೆ 250 ಅಂಕಗಳ ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು 75 ಅಂಕಗಳಿಗೆ ಮತ್ತು ಸಂದರ್ಶನದ 50 ಅಂಕಗಳನ್ನು 25 ಅಂಕಗಳಿಗೆ ಕನ್‌ವರ್ಟ್‌ ಮಾಡಲಾಗುತ್ತದೆ. ಹಂತ-2 ಮತ್ತು ಹಂತ-3 ರಲ್ಲಿ ಗಳಿಸಿದ ಗರಿಷ್ಠ ಅಂಕಗಳ ಆಧಾರದಲ್ಲಿ ವರ್ಗಾವಾರು ಅಭ್ಯರ್ಥಿಗಳನ್ನು ಅಂತಿಮ ಆಯ್ಕೆಪಟ್ಟಿಗೆ ಹುದ್ದೆಗೆ ಅನುಗುಣವಾಗಿ ನೀಡಲಾಗುತ್ತದೆ.


ಎಸ್‌ಬಿಐ ಪಿಒ ನೇಮಕಾತಿಯ ಪ್ರಮುಖ ದಿನಾಂಕಗಳು:


  • ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 05-10-2021
  • ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 25-10-2021
  • ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 25-10-2021
  • ಪ್ರಿಲಿಮ್ಸ್‌ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್‌ ಆರಂಭ : 2021 ರ ನವೆಂಬರ್ ಮೊದಲನೇ ವಾರ / ಎರಡನೇ ವಾರ
  • ಮೊದಲನೇ ಹಂತದ ಆನ್‌ಲೈನ್‌ ಪ್ರಿಲಿಮ್ಸ್‌ ಪರೀಕ್ಷೆ ದಿನಾಂಕ : 2021 ನವೆಂಬರ್ / ಡಿಸೆಂಬರ್
  • ಪ್ರಿಲಿಮ್ಸ್ ಪರೀಕ್ಷೆ ಫಲಿತಾಂಶ : 2021, ಡಿಸೆಂಬರ್
  • ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಡೌನ್‌ಲೋಡ್ ಆರಂಭ ದಿನಾಂಕ : 2021 ರ ಡಿಸೆಂಬರ್ 2 / 3ನೇ ವಾರದ ವೇಳೆಗೆ
  • ಆನ್‌ಲೈನ್‌ ಮುಖ್ಯ ಪರೀಕ್ಷೆ ದಿನಾಂಕ : 2021 ರ ಡಿಸೆಂಬರ್ ವೇಳೆಗೆ
  • ಮುಖ್ಯ ಪರೀಕ್ಷೆ ಫಲಿತಾಂಶ ದಿನಾಂಕ : 2022 ರ ಜನವರಿ ವೇಳೆಗೆ
  • ಸಂದರ್ಶನ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್‌ ಆರಂಭ ದಿನಾಂಕ : 2022 ರ ಫೆಬ್ರವರಿ 1 / 2ನೇ ವಾರ
  • ಸಂದರ್ಶನ ದಿನಾಂಕ : 2022 ರ ಫೆಬ್ರವರಿ 2 / 3ನೇ ವಾರ
  • ಅಂತಿಮ ಫಲಿತಾಂಶ ದಿನಾಂಕ : 2022 ರ ಫೆಬ್ರವರಿ ಅಥವಾ ಮಾರ್ಚ್‌

​ಎಸ್‌ಬಿಐ ಪಿಒ ಹುದ್ದೆಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸಗಳು

https://bank.sbi/careers

https://www.sbi.co.in/careers

https://bank.sbi/careers

https://www.sbi.co.in/careers

logoblog

Thanks for reading SBI ನಿಂದ 2056 ಪಿಒ ಹುದ್ದೆಗಳ ನೇಮಕ: ಪರೀಕ್ಷೆಯ ಹಂತಗಳು, ಮಾದರಿ ಬಗ್ಗೆ ಇಲ್ಲಿ ತಿಳಿಯಿರಿ..

Previous
« Prev Post

No comments:

Post a Comment

Popular Posts

Followers