🔥 SBK KANNADA PAID PDF COLLECTIONS OF 2026 🔥
✅ ಜನವರಿ to ಆಗಸ್ಟ್ 2026 ಪ್ರಚಲಿತ ವಿದ್ಯಮಾನಗಳ ಕನ್ನಡ ಪಿಡಿಎಫ್ : ₹199/-
✅ 6-10 CLASS ಸಮಾಜ ವಿಜ್ಞಾನ Oneliners ಕನ್ನಡ ಪಿಡಿಎಫ್ : ₹99/-
✅ 6-10 CLASS ವಿಜ್ಞಾನ Oneliners ಕನ್ನಡ ಪಿಡಿಎಫ್ : ₹79/-
✅ 1st PUC ಇತಿಹಾಸ, ಭೂಗೋಳಶಾಸ್ತ್ರ, ಸಮಾಜಶಾಸ್ತ್ರ & ರಾಜ್ಯಶಾಸ್ತ್ರ Oneliners ಕನ್ನಡ ಪಿಡಿಎಫ್ : ₹44/-
❇️ WhatsApp ಮೂಲಕ ಸಂಪರ್ಕಿಸಿ ❇️
SBK Education Kannada YT CHANNEL
6-10 CLASS MCQ ಕನ್ನಡ ದಲ್ಲಿ ಪ್ರತಿದಿನ
ಇಲ್ಲಿ ನೋಡಿ
Footer Logo

May 1, 2021

ಖ್ಯಾತ ಬಾಲಿವುಡ್ ನಟ ಬಿಕ್ರಮ್‌ಜೀತ್ ಕೊರೋನಾಗೆ ಬಲಿ

  ADMIN       May 1, 2021

 


ಹಿಂದಿ ಚಿತ್ರರಂಗದ ನಟ ಮೇಜರ್ ಬಿಕ್ರಮ್‌ಜೀತ್ ಕನ್ವರ್‌ಪಾಲ್ (52) ಅವರು ಕೋವಿಡ್‌ನಿಂದಾಗಿ ನಿಧನರಾದರು. ಕೋವಿಡ್‌ನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆ ತೀವ್ರಗೊಂಡಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು.

2003 ರಲ್ಲಿ ಭಾರತೀಯ ಸೇನೆಯಿಂದ ನಿವೃತ್ತಗೊಂಡ ನಂತರ ಅವರು ಬಾಲಿವುಡ್‌ ಪ್ರವೇಶಿಸಿದರು. ಬಿಕ್ರಮ್‌ಜೀತ್ ಕನ್ವರ್‌ಪಾಲ್‌ ಹಲವು ಸಿನಿಮಾಗಳು, ಒಟಿಟಿ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿದ್ದರು. ಪೇಜ್‌ 3, ‘ಅರಕ್ಷಣ್’, ‘ಪ್ರೇಮ್ ‌ರತನ್ ಧನ್ ಪಯೋ’, ‘ಜಬ್ ತಕ್ ಹೈ ಜಾನ್’ ಹಾಗೂ ‘2 ಸ್ಟೇಟ್ಸ್’ ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ

ಅವರ ಕೊನೆಯ ಚಿತ್ರ ರಾಣಾ ದಗ್ಗುಬಾಟಿ ಹಾಗೂ ತಾಪ್ಸಿ ನಟಿಸಿದ ‘ದಿ ಘಾಜಿ ಅಟ್ಯಾಕ್’. ಬಿಕ್ರಮ್‌ಜೀತ್ ಕನ್ವರ್‌ಪಾಲ್‌ ಇತ್ತೀಚಿಗೆ ಕೋವಿಡ್ -19 ಸಮಸ್ಯೆಯಿಂದ ಬಳಲುತ್ತಿದ್ದರು. ಬಾಲಿವುಡ್ ಗಣ್ಯರು ಕನ್ವರ್‌ಪಾಲ್‌ ನಿಧನಕ್ಕೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ

‘ಪೇಜ್ 3’, ‘ರಾಕೆಟ್‌ಸಿಂಗ್‌’, ‘ಆರಕ್ಷಕನ್’, ‘ಮರ್ಡರ್‌-2’, ‘2 ಸ್ಟೇಟ್ಸ್’, ‘ಘಾಜಿ ಅಟ್ಯಾಕ್’, ‘ರಹಸ್ಯ್’ ಸೇರಿ ಸಾಕಷ್ಟು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚೆಗೆ ಡಿಸ್ನಿ ಹಾಟ್‌ಸ್ಟಾರ್‌ನ ವೆಬ್‌ಸಿರೀಸ್‌ನಲ್ಲಿ ನಟಿಸಿದ್ದರು. ಕಿರುತೆರೆ ಸರಣಿಗಳ ಪೋಷಕ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದರು.



logoblog

Thanks for reading ಖ್ಯಾತ ಬಾಲಿವುಡ್ ನಟ ಬಿಕ್ರಮ್‌ಜೀತ್ ಕೊರೋನಾಗೆ ಬಲಿ

Previous
« Prev Post

No comments:

Post a Comment

Popular Posts