16ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆ:
ಈ ಸಭೆಯು ನವದೆಹಲಿಯಲ್ಲಿ ಜರುಗಿತು.
• ಜಪಾನ್ ಪ್ರಧಾನಿ ಭೇಟಿ: ಜಪಾನ್ ಪ್ರಧಾನಿ ಸಾನೆ ತಕ್ಕೈಚಿ (Sanae Takaichi) ಅವರು ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
• ರೂ. 5.9 ಲಕ್ಷ ಕೋಟಿ ಹೂಡಿಕೆ ಗುರಿ:
ಭಾರತ ಮತ್ತು ಜಪಾನ್ ನಡುವೆ ಹೊಸ ಒಪ್ಪಂದಗಳ ಮೂಲಕ ಭಾರತಕ್ಕೆ ಸುಮಾರು ₹5.9 ಲಕ್ಷ ಕೋಟಿಗಿಂತ (ಸುಮಾರು 6 ಲಕ್ಷ ಕೋಟಿ) ಹೆಚ್ಚಿನ ಜಪಾನಿನ ಹೂಡಿಕೆ ಹರಿದುಬರಲಿದೆ.
• ಸಹಕಾರದ ಪ್ರಮುಖ ಕ್ಷೇತ್ರಗಳು:
ಕೃತಕ ಬುದ್ಧಿಮತ್ತೆ (AI), ಆರ್ಥಿಕ ಭದ್ರತೆ, ಅಪರೂಪದ ಖನಿಜಗಳು (Rare Earth Minerals),ರಕ್ಷಣೆ, ಆರೋಗ್ಯ,ಸೆಮಿಕಂಡಕ್ಟರ್, ಕ್ವಾಂಟಮ್ ತಂತ್ರಜ್ಞಾನ ಮತ್ತು ಇಂಧನ ಕ್ಷೇತ್ರಗಳಲ್ಲಿ ಒಪ್ಪಂದಗಳು ನಡೆದಿವೆ.
•ಜೈವಿಕ ಅನಿಲ ಘಟಕಗಳ ಸ್ಥಾಪನೆ:
ಜೈವಿಕ ಅನಿಲ ಯೋಜನೆಯಡಿ ಭಾರತದಲ್ಲಿ 1000 ಜೈವಿಕ ಅನಿಲ ಮತ್ತು ಸಾವಯವ ಗೊಬ್ಬರ ಘಟಕಗಳನ್ನು ಸ್ಥಾಪಿಸಲು ಘೋಷಿಸಲಾಗಿದೆ.
🌿ನೆನಪಿರಬೇಕಾದ ಹೆಚ್ಚಿನ ಮಾಹಿತಿ
• ಭಾರತ-ಜಪಾನ್ ಜಂಟಿ ಮಿಲಿಟರಿ ಸಮರಾಭ್ಯಾಸಗಳು
- ಧರ್ಮ ಗಾರ್ಡಿಯನ್ (Dharma Guardian): ಉಭಯ ದೇಶಗಳ ಭೂಸೇನೆಗಳ ನಡುವೆ ನಡೆಯುವ ಸಮರಾಭ್ಯಾಸ.
- ಜಿಮೆಕ್ಸ್ (JIMEX):ಭಾರತ ಮತ್ತು ಜಪಾನ್ ನೌಕಾಸೇನೆಗಳ ನಡುವಿನ ಅಭ್ಯಾಸ.
- ವೀರ್ ಗಾರ್ಡಿಯನ್ (Veer Guardian): ಉಭಯ ದೇಶಗಳ ವಾಯುಪಡೆಗಳ ಜಂಟಿ ಫೈಟರ್ ಜೆಟ್ ಅಭ್ಯಾಸ.
🌿ಕ್ವಾಡ್ (QUAD) ಒಕ್ಕೂಟ:
ಭಾರತ ಮತ್ತು ಜಪಾನ್ ಎರಡೂ ದೇಶಗಳು ಅಮೆರಿಕ ಮತ್ತು ಆಸ್ಟ್ರೇಲಿಯಾದೊಂದಿಗೆ 'ಕ್ವಾಡ್' (Quadrilateral Security Dialogue) ಒಕ್ಕೂಟದ ಸಕ್ರಿಯ ಸದಸ್ಯ ರಾಷ್ಟ್ರಗಳಾಗಿವೆ.
- ಬುಲೆಟ್ ರೈಲು ಯೋಜನೆ:
ಭಾರತದ ಮೊದಲ ಬುಲೆಟ್ ರೈಲು ಯೋಜನೆ (ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್) ಜಪಾನ್ ದೇಶದ ತಾಂತ್ರಿಕ ಮತ್ತು ಆರ್ಥಿಕ ಸಹಯೋಗದೊಂದಿಗೆ (JICA - Japan International Cooperation Agency) ಅನುಷ್ಠಾನಗೊಳ್ಳುತ್ತಿದೆ.
• ಜಪಾನ್ ದೇಶದ ಸಂಸತ್ತಿನ ಹೆಸರು: ಜಪಾನ್ ದೇಶದ ಸಂಸತ್ತನ್ನು 'ಡಯಟ್' (Diet) ಎಂದು ಕರೆಯಲಾಗುತ್ತದೆ.
• ಜಪಾನ್ ರಾಜಧಾನಿ ಮತ್ತು ಕರೆನ್ಸಿ: ಜಪಾನ್ ರಾಜಧಾನಿ ಟೋಕಿಯೋ, ಮತ್ತು ಅದರ ಅಧಿಕೃತ ಕರೆನ್ಸಿ 'ಯೆನ್' (Yen).

No comments:
Post a Comment