Footer Logo

January 13, 2024

Airport Authority Of India Apprentice Recruitment 2024

  ADMIN       January 13, 2024

ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ (ಎಎಐ) ಗ್ರಾಜುಯೇಟ್‌ ಅಪ್ರೆಂಟಿಸ್, ಡಿಪ್ಲೊಮ ಅಪ್ರೆಂಟಿಸ್, ಐಟಿಐ ಅಪ್ರೆಂಟಿಸ್‌ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ಎಎಐ'ನ ಸಿವಿಲ್, ಆಟೋಮೊಬೈಲ್, ಆರ್ಕಿಟೆಕ್ಚರ್, ಕಂಪ್ಯೂಟರ್ ಸೈನ್ಸ್‌, ಡಾಟಾ ಅನಾಲಿಸಿಸ್, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್‌, ಐಟಿ ಮೆಕ್ಯಾನಿಕಲ್, ಇತರೆ ವಿಭಾಗಗಳಲ್ಲಿ ಭರ್ತಿ ಮಾಡಲಾಗುತ್ತದೆ. ಅರ್ಹತೆ ಮತ್ತು ಆಸಕ್ತಿ ಯುಳ್ಳವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.



ನೇಮಕಾತಿ ಪ್ರಾಧಿಕಾರ : ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ

ಹುದ್ದೆಗಳ ಹೆಸರು : ಶಿಶಿಕ್ಷು ತರಬೇತುದಾರರು (ಪದವಿ, ಡಿಪ್ಲೊಮ, ಐಟಿಐ)

ಹುದ್ದೆಗಳ ಸಂಖ್ಯೆ : 130


ಹುದ್ದೆಗಳ ವಿವರ

ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆ : 30

ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆ : 45

ಐಟಿಐ ಟ್ರೇಡ್‌ ಅಪ್ರೆಂಟಿಸ್ ಹುದ್ದೆ : 55

ಶಿಶಿಕ್ಷು ತರಬೇತುದಾರರಿಗೆ ಮಾಸಿಕ ಸ್ಟೈಫಂಡ್ ವಿವರ

ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆ : Rs.15000.

ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆ : Rs.12000.

ಐಟಿಐ ಟ್ರೇಡ್‌ ಅಪ್ರೆಂಟಿಸ್ ಹುದ್ದೆ : Rs.9000.


ಹುದ್ದೆವಾರು ವಿದ್ಯಾರ್ಹತೆ

ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆ : ಯಾವುದೇ ಡಿಗ್ರಿ / ಬಿಇ (ಹುದ್ದೆ ವಿಭಾಗಕ್ಕೆ ಸಂಬಂಧಿಸಿದ ವಿಷಯದಲ್ಲಿ

ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆ : ಡಿಪ್ಲೊಮ

ಐಟಿಐ ಟ್ರೇಡ್‌ ಅಪ್ರೆಂಟಿಸ್ ಹುದ್ದೆ : ಐಟಿಐ


ನೇಮಕಾತಿ ವಿಧಾನ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್‌ ಲಿಸ್ಟ್‌ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ.

ವಯಸ್ಸಿನ ಅರ್ಹತೆಗಳು

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 26 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.


ಅರ್ಜಿ ಸಲ್ಲಿಸುವ ವಿಧಾನ

ಅರ್ಹ ಮತ್ತು ಆಸಕ್ತರು ಮೊದಲಿಗೆ NATS- ನ್ಯಾಷನಲ್ ಅಪ್ರೆಂಟಿಸ್ ಟ್ರೈನಿಂಗ್ ಸ್ಕೀಮ್‌ ಪೋರ್ಟಲ್‌ನಲ್ಲಿ ರಿಜಿಸ್ಟ್ರೇಷನ್‌ ಮಾಡಿಕೊಳ್ಳಿ. ನಂತರ ಎಎಐ ವೆಬ್‌ಸೈಟ್‌ನಲ್ಲಿ ಅಥವಾ https://www.apprenticeshipindia.gov.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಏರ್‌ಪೋರ್ಟ್‌ ಅಥಾರಿಟಿ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ ವಿಳಾಸ : https://www.aai.aero/

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಆರಂಭಿಕ ದಿನಾಂಕ : 13-01-2024

ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 31-01-2024

logoblog

Thanks for reading Airport Authority Of India Apprentice Recruitment 2024

Previous
« Prev Post

No comments:

Post a Comment

Popular Posts

Followers